ಬಲೂಚಿಸ್ತಾನ, ಇರಾನಿನ

	 ಈ ಪ್ರದೇಶ ದಕ್ಷಿಣ ಇರಾನಿನ ಬಲೂಚಿ ಸ್ತಾನ್-ವಾ-ಸಿಸ್ತಾನ್-ಓಸ್ತಾನ್ ಪ್ರಾಂತ್ಯದಲ್ಲಿದೆ.  ವಿಸ್ತೀರ್ಣ 181,600 ಚ.ಕಿ.ಮೀ. ಜನಸಂಖ್ಯೆ 2.1 ಮಿಲಿಯನ್. ಇದರ ರಾಜಧಾನಿ eóÁಹೆದಾನ್. ಜನಸಂಖ್ಯೆ 4,20,000. ಇದು ಬಂಜರುನಾಡು, ಸಾಮಾಜಿಕವಾಗಿ ಹಿಂದುಳಿದಿದೆ, ಆರ್ಥಿಕವಾಗಿ ಪ್ರಗತಿ ಹೊಂದಿಲ್ಲ. ಮಳೆ ಕಡಿಮೆ. ವರ್ಷದಲ್ಲಿ 8 ತಿಂಗಳೂ ಇಲ್ಲಿ ತೀವ್ರ ಬಿಸಿಲು ಇರುತ್ತದೆ. ಇರಾನಿನ ಆದಿವಾಸಿ ಜನ, ಬ್ರಾಹುಯಿ ಮತ್ತು ಬಲೂಚಿ ಬುಡಕಟ್ಟಿನವರು ಹಾಗೂ ಭಾರತದ ಜಾತ್ ಜನರು ಕೆಲವರು ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಒಂಟೆ ಪಡೆಗಳ ದಾಳಿ ಹಾಗೂ ಆಂತರಿಕ ಒಳಯುದ್ಧಗಳು ಹಿಂದೆ ಇಲ್ಲಿ ಸಾಮಾನ್ಯವಾಗಿದ್ದುವು.

	ಸಮಗ್ರ ಬಲೂಚಿಸ್ತಾನದ ಪಶ್ಚಿಮ ಭಾಗವನ್ನು ಪರ್ಷಿಯ (ಇರಾನ್) 19ನೆಯ ಶತಮಾನದಲ್ಲಿ ಗೆದ್ದುಕೊಂಡಿತು. 1872ರಲ್ಲಿ ಅದರ ಗಡಿಗಳನ್ನು ನಿರ್ಣಯಿಸಲಾಯಿತು. ಇರಾನ್ ಸರ್ಕಾರ ಜಲಾಶಯಗಳನ್ನು ಕಟ್ಟಿಸಿ ಜನರು ವ್ಯವಸಾಯದಲ್ಲಿ ನಿರತರಾಗಲು ನೆರವು ನೀಡಿದೆ. ಬಲೂಚಿಸ್ತಾನ್-ವಾ-ಸಿಸ್ತಾನ್-ಓಸ್ತಾನ್ ಪ್ರಾಂತ್ಯದ ಆಡಳಿತ ಕೇಂದ್ರ eóÁಹೆದಾನ್ ನಗರದಿಂದ ಚಾಹಿ ಬಹಾರ್ ರೇವಿಗೆ ರಸ್ತೆ ಹಾಕಿದೆ. eóÁಹೆದಾನ್ ಹಾಗೂ ಪಾಕಿಸ್ತಾನಗಳ ನಡುವೆ ರೈಲುಮಾರ್ಗವಿದೆ. ಪ್ರಮುಖ ಪಟ್ಟಣಗಳು ಜಾಬೊಲ್ ಮತ್ತು eóÁಹೆದಾನ್.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ